ಮರಳು ಮಾಡಿದಳು ನನ್ನ ಮನದನ್ನೆ ಮನೋರಮೆ
ತಿರುಗಿ ನೋಡದೆ ತಿಲಾಂಜಲಿಯಿಟ್ಟು ಹೋದಳೀ ತಿಲೋತ್ತಮೆ ।
ಮಂಕು ಮಾಡಿ ಮರೆಯಾದವಳು ಮತ್ತೆ ಬರುವಳೆಂದು
ಸಂಭ್ರಮಿಸುವುದೇ ನನ್ನ ಭ್ರಮೆ ।।
ಗೆಳತಿ ,ಆಸೆ ಬೆಂಬತ್ತಿದ ನಿನಗೆ ,ಸಿಗಬಹುದು ಬಹಳ ಆಸ್ತಿ ।
ತಿಳಿದಿರಲಿ ಸಿಗುವುದಿಲ್ಲ ನಿನಗೆ ,ನನಗಿಂತಲೂ ಪ್ರೀತಿ ಮಾಡುವವ ತುಂಬಾ ಜಾಸ್ತಿ ।।
ಮೊಳಗಿದೆ ಒಳಗಿಂದ ಸುಮಧುರ ಹೃದಯವಾಣಿ ।
ಹೋಗಬೇಕು ನಿಲುಕದಷ್ಟು ದೂರ ,ನೀ ಬಳಸಿದರೂ ದೂರವಾಣಿ ।।
ಕೇಳಲಿಲ್ಲ ನಿನ್ನ, ಏಕೆ ದೂರದೇ ಎಂಬ ಪ್ರಶ್ನೆಗೆ ಉತ್ತರ ।
ತಿಳಿದಿದೆ ಕಾರಣವೂ ನನಗೆ, ನೀ ದಕ್ಷಿಣ ನಾ ಉತ್ತರ ।।
ಚೆಲುವೇ , ಕಿವಿ ಆಲಿಸಿ ಕೇಳು ನನ್ನ ಕಡೆ ಮಾತೊಂದ ।
ನಿನ್ನ ವಿದಾಯ ,ನನ್ನ ಹೊಸ ಸುಖ ಜೀವನದ ನವ ಅಧ್ಯಾಯ ।।
---ಗೋ ನಾ ರಾಮಕೃಷ್ಣ ಭಟ್
No comments:
Post a Comment