ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ!
-ಜಿ.ಪಿ.ರಾಜರತ್ನಂ
ಈ ಪದಗಳಿಂದ ಪ್ರೇರಿತನಾಗಿ ,ನನ್ನ ಕಲ್ಪನೆಯನ್ನು ಕನ್ನಡ ಪದಗಳಲ್ಲಿ ಬಣ್ಣಿಸುವ ಸಣ್ಣ ಪ್ರಯತ್ನ ....
ಕೋಟೆಯಲಿ ಕಣ್ಮುಚ್ಚಿ ಕೈಲೊಂದು ಕಲ್ಕೊಟ್ಟರೆ
ಕಸ್ತೂರಿ ಕನ್ನಡವನ್ನೇ ನಾ ಕೆತ್ತುವೆ ।
ಕಿವಿಮುಚ್ಚಿ ಹೊರನೂಕಿ ಕೊಟ್ಟಿಗೆಯಲಿಟ್ಟರೂ
ಕರುವಿನ ಕೂಗಲು ಕನ್ನಡವ ಕೇಳುವೆ ।।
ಕೆಸರಲ್ಲಿ ಹೊತ್ತೊಯ್ದು ಕಾಲ್ಜಾರಿ ಕೆಳಬಿದ್ದರೂ
ಕೈಯೂರಿ ಮೇಲೆದ್ದು ತಾಯ ಭಾವುಟವ ಮೇಲೆತ್ತುವೆ ।
ಕಾಡಿನಲಿ ಅತಿನಡೆದು ಹಾದಿ ತಪ್ಪಲು
ಶ್ರೀಗಂಧದ ಸುಮವಿಡಿದು ನಮ್ಮ ನಾಡ ಸೇರುವೆ ।।
ಕೈಸನ್ನೆ ಮೈಸನ್ನೆ ಮಾಡದಿದ್ದರೂ
ಮನಸ್ಸೊಡನೆ ಕನ್ನಡದಿ ಮಾತಾಡುವೆ ।
ಕುಂಬಾರನ ಕಸಬ ನಾ ಕಲಿತರೆ
ಮಣ್ಣ ಮಡಕೆಯ ಮೇಲೆ ಭೂಪಟವ ರಚಿಸುವೆ ।।
--ಗೋ ನಾ ರಾಮಕೃಷ್ಣ ಭಟ್
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ!
-ಜಿ.ಪಿ.ರಾಜರತ್ನಂ
ಈ ಪದಗಳಿಂದ ಪ್ರೇರಿತನಾಗಿ ,ನನ್ನ ಕಲ್ಪನೆಯನ್ನು ಕನ್ನಡ ಪದಗಳಲ್ಲಿ ಬಣ್ಣಿಸುವ ಸಣ್ಣ ಪ್ರಯತ್ನ ....
ಕೋಟೆಯಲಿ ಕಣ್ಮುಚ್ಚಿ ಕೈಲೊಂದು ಕಲ್ಕೊಟ್ಟರೆ
ಕಸ್ತೂರಿ ಕನ್ನಡವನ್ನೇ ನಾ ಕೆತ್ತುವೆ ।
ಕಿವಿಮುಚ್ಚಿ ಹೊರನೂಕಿ ಕೊಟ್ಟಿಗೆಯಲಿಟ್ಟರೂ
ಕರುವಿನ ಕೂಗಲು ಕನ್ನಡವ ಕೇಳುವೆ ।।
ಕೆಸರಲ್ಲಿ ಹೊತ್ತೊಯ್ದು ಕಾಲ್ಜಾರಿ ಕೆಳಬಿದ್ದರೂ
ಕೈಯೂರಿ ಮೇಲೆದ್ದು ತಾಯ ಭಾವುಟವ ಮೇಲೆತ್ತುವೆ ।
ಕಾಡಿನಲಿ ಅತಿನಡೆದು ಹಾದಿ ತಪ್ಪಲು
ಶ್ರೀಗಂಧದ ಸುಮವಿಡಿದು ನಮ್ಮ ನಾಡ ಸೇರುವೆ ।।
ಕೈಸನ್ನೆ ಮೈಸನ್ನೆ ಮಾಡದಿದ್ದರೂ
ಮನಸ್ಸೊಡನೆ ಕನ್ನಡದಿ ಮಾತಾಡುವೆ ।
ಕುಂಬಾರನ ಕಸಬ ನಾ ಕಲಿತರೆ
ಮಣ್ಣ ಮಡಕೆಯ ಮೇಲೆ ಭೂಪಟವ ರಚಿಸುವೆ ।।
--ಗೋ ನಾ ರಾಮಕೃಷ್ಣ ಭಟ್