Monday, December 22, 2014

ಪ್ರಕೃತಿ

ಕಗ್ಗತ್ತಲಲಿ ಕಾಣದಿರುವೆ ನೀನೆಲ್ಲಿರುವೆ ರವಿ
ಸುತ್ತಲ್ಲೆಲ್ಲು ಸುಳಿಯದಿರುವೆ ನಾನಿಲ್ಲುರುವೆ ಭುವಿ !
ನಿನ್ನ ನಾ ಗ್ರಹಿಸದಿರೆ ಆಗುವುದೇ ಗ್ರಹಣ
ನಿನ್ನ ನಾ ಮರೆತರೆ ಬಂದಪ್ಪುವುದೇ ಮರಣ !

ನೀನಿದ್ದರೂ ಕೆಂಪಾಗಿ ,ನಾನಿರುವೆ ತಂಪಾಗಿ ಮುನ್ನ
ಹುಡುಕುತಿರುವೆ ದಾರಿ ಕಾಣದೆ ನಿನ್ನ !
ಕಳಿಸಿಹೆನು ಸಾಗರವ ತಿಳಿಯಲು ಮಾಹಿತಿಯ ,
ಮರಳಿವೆ ಅಲೆಗಳು ಸಿಗದೇ ಸೇತುವೆಯ !

ಅನಿಸಿಹಿದು ಮನದಲ್ಲಿ ಇಂದು ,ವಿರಳವಲ್ಲ
ಬಹಳ ಸರಳವಿದು  ಎಂದು !
ಚಂದಿರನು ನಿಂದಿಹನು ಆಗಸದಿ ಮುಂಜಾನೆಯ ತನಕ
ಹಿಂದಿರುಗಿಸಲೆಂದೇ ಏನೋ ಸೂರ್ಯನ ಸಾಲದ ಬಡ್ಡಿ ಬೆಳಕ !

                                                                           ---ಗೋ ನಾ ರಾಮಕೃಷ್ಣ ಭಟ್ 

Monday, June 16, 2014

ಬದುಕಿನ ಪಯಣ

ಸುಮ್ಮನೆ ಸುತ್ತಾಡಿದರೂ  ಸುಸ್ತಾಗದಂತ  ಸಂತೋಷ ,ಪ್ರತಿಕ್ಷಣದ  
ಲೈಫಿನ  ಜರ್ನಿಯಲಿ  ಪ್ರತಿಯೊಬ್ಬನೂ  ,ಪುರುಸೋತ್ತಿಲ್ಲದ ಪ್ರಯಾಣಿಕ !!

ಆದಿಯಲ್ಲಿ ಮೊದಲ ಗೇರು,ಪಿಕಪ್ ಗಾಗಿ ಇನ್ನೊಂದು  ಗೇರು,ಜೀವನದ ರಸ್ತೆಯಲ್ಲಿ ಏರು ಪೇರು
ಈ ಎಲ್ಲ ಎಕ್ಸ್-ಟ್ರ ಕೇರು ತೆಗೆದುಕೊಂಡ  ನಾವೆಲ್ಲಾ ಚಾಣಕ್ಷ ಚಾಲಕರು!!

ಮಾರ್ಗದ ಕಿಲೋಮೀಟರು ಅಳತೆಗೂ ವಯಸ್ಸಿಗೂ ,ಗಂಡ ಹೆಂಡತಿ ಸಂಬಂಧ  
ಕೊನೆಯಲ್ಲಿ ಒಂದು ದಿನ  ಶತಕವನು ಮುಟ್ಟಲೆ ಬೇಕೆಂದಾ!!

ಗುಂಡಿ ಹೊಂಡ ಗಳು,ಸಣ್ಣ ಹಂಪ್ಗಳು ,ಸಣ್ಣ ಪುಟ್ಟ  ಕಷ್ಟ ಕಾರ್ಪಣ್ಯಗಳು 
ಬುದ್ದಿಯೆಂಬ ಬ್ರೇಕ್ ಹಾಕಲಿಕ್ಕೆ ,ಕಾಣದ ದೇವ ಕೊಟ್ಟ ಸಲಹೆಗಳು !!

ನಮ್ಮ ಹಳೆ ಗಾದೆಯಂತೆ ಈ  ರೋಡ್ ಸಿಗ್ನಲ್ಸ್ ಗಳು,   
ಶಾರ್ಟ್ ಸೆಂಟೆನ್ಸು ಆದ್ರೆ ಲಾಟ್  ಆಫ್ ಮೀನಿಂಗ್ಸ್ ಗಳು !!   

ಮೌನಿಯಾಗಿ ಕೆಲಸ ಮಾಡಲು ,ನೋ ಹಾರ್ನ್ ನೋಡಬೇಕು
ಬೇರೆವರಿಗೆ ಅವಕಾಶ ಕೊಡಲು ,ಜೀಬ್ರ ಕ್ರಾಸಿಂಗ್ ಬೇಕು !!

ಕಂಡವರ ವಿಷಯಕ್ಕೆ ತಲೆ ಹಾಕದಿರಲು ,ನೋ ಎಂಟ್ರಿ 
ಹೋದದಾರಿಯಲ್ಲಿ ಮತ್ತೆ ತಿರುಗಿ ಹಿಂದೆ ಬಾರದಿರಲು,ಒನ್ ವೆ  ರೋಡ್ ನೋಡ್ರಿ !!

ಜನತೆ ಜಾಗರೂಕರನ್ನಾಗಿಸಲು ಆಕ್ಸಿಡೆಂಟ್ ಜೋನ್ಸ್  
ಜೀವನದ ಟರ್ನಿಂಗ್ ಪಾಯಿಂಟ್ಸ್ ನೆನಪಿಸುವ,ಡಿಫರೆಂಟ್ ಡೈರೆಕ್ಷನ್ಸ್ !!

ಒಂದೊಂದು ಚಿಹ್ನೆಯಿಂದ ಬೇರೆ ಬೇರೆ ಸೂಚನೆಗಳು,
ಕಲ್ಪನೆಗೂ ನಿಲುಕದ ದೇವನ ಲಗಾಮುಗಳು ।।
                                                       ---ಗೋ ನಾ ರಾಮಕೃಷ್ಣ ಭಟ್ 

Sunday, March 30, 2014

ಮನಸ್ಸೆಂಬ ಮನೆ


ಮನಸ್ಸೆಂಬ ಮಾಳಿಗೆ   ಮನೆಯಲ್ಲಿ , ಪುಟ್ಟದೊಂದು ಕೋಣೆ ಕೊನೆಯಲ್ಲಿ
ವಾಲುತಿಹುದು ,ಪ್ರೀತಿಯಾ ಜೋ-ಕಾಲಿ ನಡುವಲ್ಲಿ ||
ತೂಗುತಿರುವರು ಯಾರೋ ? ಎನ್ನುವ ಪ್ರಶ್ನೆ ,ಇರುವ ಎರಡಾಯ್ಕೆ ,
ಸ್ನೇಹ ಒಂದಾದರೆ   ,ಮೋಹ  ಮತ್ತೊಂದಂತೆ ,
ನೆರೆಹೊರೆಯಲ್ಲಿ ಸೇರಿ ಬೆರೆತು  ಹೋದಂತೆ।।

ಗುಡಿಯಲ್ಲಿ ಪೂಜೆ ದಿನ ನಡಿಯುತಿರುವಂತೆ,
ಗಂಟೆಯಾ ಸದ್ದು ಬರುತ್ತಿದೆ , ಡವ  ಡವ  ಹೃದಯದಿಂದ 
ಚಂದಾದ ಚಾವಣಿಯು ಕಟ್ಟಡಕ್ಕೆ , ಪಕ್ಕದ ಪಕ್ಕೆಲಬು ಹೃದಯಕ್ಕೆ
ಧಮನಿಯ ನೆತ್ತರು ಒಂದಕ್ಕೆ , ಜಳ   ಜಳ - ನೀರಿನ ಕಲರವ ಮತ್ತೊಂದಕ್ಕೆ ।।

ನಾನಾ  ಜನರು ಸೇರಿ ಆಗುವುದು ಸಂತೆ ,
ನಾಲ್ಕಾರು ವಿಷಯಕ್ಕೆ ,ಆಗುವುದೇ ಚಿಂತೆ
ಮತ್ಯಾರು ತಿಳಿದಿಹರು ನಮ್ಮನೆಯ ಹುಳುಕ
ಗೊತ್ತಾದ್ರು ತಿಳಿಸದಿರಿ ಮನಸ್ಸಿನ ಅಳುಕ ।।


                                                          --ಗೋ ನಾ ರಾಮಕೃಷ್ಣ ಭಟ್