ಪ್ರಿಯ ಸಹೋದರ ಸಹೋದರಿಯರೇ ,
ಇಲ್ಲಿಯ ತನಕ,ನಾನು ಬರೆದಿರುವುದೇನಾದರು ಇದ್ದರೆ ವಿದ್ಯಾರ್ಥಿದೆಸೆಯಲ್ಲಿ ಪರೀಕ್ಷೆಗಾಗಿ,ದೈನಂದಿನ ಜೀವನದ ವ್ಯಾಪಾರ ವಹಿವಾಟಿಗಾಗಿ .ಹೀಗೆ ಆಗಾಗ ಕೆಲವೊಮ್ಮೆ ಇತರರ ಉಪಯುಕ್ತ(ಉಪಯುಕ್ತವಲ್ಲದಿದ್ದರೂ ಸಹ)ಬರಹಗಳನ್ನು ಓದುವ ಹವ್ಯಾಸ.ಹೀಗೆ ಓದಿ,ಹಾಗೆ ಮರೆತರೆ ಏನು ಪ್ರಯೋಜನ?,ನಾನು ಕೂಡ ಓದುವವರು ಇರುವರೋ ಇಲ್ಲವೋ, ಅದು ಬೇರೆ ಮಾತು,ಬರೆಯುವ ಪ್ರಯತ್ನವನ್ನು ಮಾಡಲೇಬೇಕು ಎನ್ನುವ ಒಂದು ಮನದಾಸೆ ಇಂದ ,ಈ ಬರಹದ ಮುನ್ನುಡಿಗೆ ಕೈ ಇರಿಸಿದ್ದೇನೆ .ಈ ಪ್ರಯತ್ನದಲ್ಲೆನಾದರೂ ಯಶಸ್ಸನ್ನು ಕಂಡರೆ ,ಆ ಯಶಸ್ಸನ್ನು ಯಾರಿಗೆ ಅರ್ಪಿಸಲಿ ಎಂದು,ಒಂದು ಕ್ಷಣ ನನಗೆ ತೋಚಿ ,ನಂತರ ಇದರಲ್ಲಿ ಯಶಸ್ಸು ನಿರ್ಧರಿಸಿ ಏನಾದ್ರು ಪ್ರಯೋಜನ ಉಂಟಾ ಎಂದು ,ನನ್ನ ಮನಕ್ಕೆ ತಿಳಿ ಹೇಳಿಕೊಂಡು ನನ್ನ ಈ ಪ್ರಥಮ ಬರಹಕ್ಕೆ ಅಲ್ಪವಿರಾಮ ಹಾಕುತ್ತಿದ್ದೇನೆ .
ಇಂತಿ ನಿಮ್ಮ
ರಾಮಕೃಷ್ಣ