ಚಿಮ್ಮುತ ಚೀರಿವೆ
ಚಿಂತೆಗಳು|
ಚಿಂತೆಯ ಹಿಂದೆ
ಅವಳಿಹಳು||
ಆಸೆಗಳ ಕಾಲ ಹುಸಿಯ
ತಂದಿದೆ|
ನಿರಾಸೆಗಳ
ಧಾರೆ ಹರಿಸಿದಂತಿದೆ||
ಗತಕಾಲದ
ನೆನಪು ತುಂಬಿಹ ನನ್ನ ಪುಸ್ತಕ ,
ಫ್ರಥಮ ಪುಟವನು
ಮನದಿ ನೆನೆದರೆ,
ಗಹಗಹಿಸಿ ನಗುವ
ಅವಳಿಹ ಸಮಯ|
ಕೊನೆಯ ಪುಟದ
ತನಕಹಾಗೆ ತಿರುವಲು,
ಆ ಹರ್ಷವೆಂದರೇನು
ನಾನು ಮರೆಯಲು,
ಕಾರಣವೆ ಅವಳಕಣ್ಮರೆ
ಸಮಯ||ಚಿಮ್ಮುತ||
ಚಿತೆಯು
ನಿರ್ಜೀವವಾದ ಶವವ ಸುಟ್ಟರೆ
ಚಿಂತೆಗಳು ನನ್ನ
ಸಜೀವ ದಹಿಸಿವೆ|
ಈ ದಹನದಲಿ ಕೂಡ
ನಿನ್ನ ಸ್ಮರಿಸುವೆ
ಆ ಸ್ಮರಣೆಯಲ್ಲು
ಕೂಡ ನಿನ್ನನೆ ಸೇರುವೆ||
--ಗೋ
ನಾ ರಾಮಕೃಷ್ಣ ಭಟ್