Monday, October 10, 2011

ಅನಿಸಿಕೆ

ನನ್ನಯ ಮನಸ್ಸಿನ ಅನಿಸಿಕೆ|
ಸವಿ ಸಂತೋಷ ನನಗೀಗ ಮರೀಚಿಕೆ||

ಮಾಸಿದೆ ಜೀವ ,ತಡಿಯದೇ ನೋವ|
ಹುದುಗಿಹ ಕನಸನು, ಮಾಡಿಹೆ  ನಿರ್ಜೀವ||
ನೋ ವೀನ  ದಂತಕಥೆ ,ನನ್ನ ವ್ಯಥೆ|
ಅದರಲ್ಲಿ ಏನಿಹುದು ಅಂತ ಸಾರ್ಥಕತೆ ||ನನ್ನಯ||

ಕಳೆದೋದ ಕಾಲ ಮತ್ತೆ ಬಂದರೆ,
ನನ್ನ ಹಳೆ ಆಸೆಗಳ  ರಾಶಿ ತಂದರೆ
ಯೋಚಿಸಿ ಗೆಲ್ಲವ ಆಸೆ,
ಅದುವೇ  ನನ್ನ  ಕೊನೆಯ ಆಸೆ || ನನ್ನಯ||
                                                                                --ಗೋ ನಾ ರಾಮಕೃಷ್ಣ ಭಟ್ 

Tuesday, July 5, 2011

ಚಿಂತೆ

ಚಿಮ್ಮುತ ಚೀರಿವೆ ಚಿಂತೆಗಳು|
ಚಿಂತೆಯ ಹಿಂದೆ ಅವಳಿಹಳು||
ಆಸೆಗಳ ಕಾಲ ಹುಸಿಯ ತಂದಿದೆ|
ನಿರಾಸೆಗಳ ಧಾರೆ ಹರಿಸಿದಂತಿದೆ||


ಗತಕಾಲದ ನೆನಪು ತುಂಬಿಹ ನನ್ನ ಪುಸ್ತಕ ,
ಫ್ರಥಮ ಪುಟವನು ಮನದಿ ನೆನೆದರೆ,
ಗಹಗಹಿಸಿ ನಗುವ ಅವಳಿಹ ಸಮಯ|
ಕೊನೆಯ ಪುಟದ ತನಕಹಾಗೆ ತಿರುವಲು,
ಆ ಹರ್ಷವೆಂದರೇನು ನಾನು ಮರೆಯಲು,
ಕಾರಣವೆ ಅವಳಕಣ್ಮರೆ ಸಮಯ||ಚಿಮ್ಮುತ||

ಚಿತೆಯು ನಿರ್ಜೀವವಾದ ಶವವ ಸುಟ್ಟರೆ
ಚಿಂತೆಗಳು ನನ್ನ ಸಜೀವ ದಹಿಸಿವೆ|
ಈ ದಹನದಲಿ ಕೂಡ ನಿನ್ನ ಸ್ಮರಿಸುವೆ
ಆ ಸ್ಮರಣೆಯಲ್ಲು ಕೂಡ ನಿನ್ನನೆ ಸೇರುವೆ||

                                              --ಗೋ ನಾ ರಾಮಕೃಷ್ಣ ಭಟ್