ನನ್ನಯ
ಮನಸ್ಸಿನ ಅನಿಸಿಕೆ|
ಸವಿ
ಸಂತೋಷ ನನಗೀಗ ಮರೀಚಿಕೆ||
ಮಾಸಿದೆ
ಈ ಜೀವ ,ತಡಿಯದೇ ನೋವ|
ಹುದುಗಿಹ
ಕನಸನು, ಮಾಡಿಹೆ ನಿರ್ಜೀವ||
ನೋ ವೀನ ದಂತಕಥೆ ,ನನ್ನ ಈ ವ್ಯಥೆ|
ಅದರಲ್ಲಿ ಏನಿಹುದು ಅಂತ ಸಾರ್ಥಕತೆ ||ನನ್ನಯ||
ಕಳೆದೋದ
ಕಾಲ ಮತ್ತೆ ಬಂದರೆ,
ನನ್ನ
ಆ ಹಳೆ ಆಸೆಗಳ ರಾಶಿ
ತಂದರೆ
ಯೋಚಿಸಿ
ಗೆಲ್ಲವ ಆಸೆ,
ಅದುವೇ ನನ್ನ ಕೊನೆಯ
ಆಸೆ || ನನ್ನಯ||
--ಗೋ ನಾ ರಾಮಕೃಷ್ಣ ಭಟ್