ಮನಸ್ಸೆಂಬ
ಮಾಳಿಗೆ ಮನೆಯಲ್ಲಿ
, ಪುಟ್ಟದೊಂದು ಕೋಣೆ ಕೊನೆಯಲ್ಲಿ
ವಾಲುತಿಹುದು
,ಪ್ರೀತಿಯಾ ಜೋ-ಕಾಲಿ ನಡುವಲ್ಲಿ
||
ತೂಗುತಿರುವರು
ಯಾರೋ ? ಎನ್ನುವ ಪ್ರಶ್ನೆ ,ಇರುವ ಎರಡಾಯ್ಕೆ ,
ಸ್ನೇಹ
ಒಂದಾದರೆ ,ಮೋಹ ಮತ್ತೊಂದಂತೆ
,
ನೆರೆಹೊರೆಯಲ್ಲಿ
ಸೇರಿ ಬೆರೆತು ಹೋದಂತೆ।।
ಗುಡಿಯಲ್ಲಿ
ಪೂಜೆ ದಿನ ನಡಿಯುತಿರುವಂತೆ,
ಗಂಟೆಯಾ
ಸದ್ದು ಬರುತ್ತಿದೆ , ಡವ ಡವ ಹೃದಯದಿಂದ ।
ಚಂದಾದ
ಚಾವಣಿಯು ಕಟ್ಟಡಕ್ಕೆ , ಪಕ್ಕದ ಪಕ್ಕೆಲಬು ಈ ಹೃದಯಕ್ಕೆ
ಧಮನಿಯ
ನೆತ್ತರು ಒಂದಕ್ಕೆ , ಜಳ ಜಳ
- ನೀರಿನ ಕಲರವ ಮತ್ತೊಂದಕ್ಕೆ ।।
ನಾನಾ ಜನರು
ಸೇರಿ ಆಗುವುದು ಸಂತೆ ,
ನಾಲ್ಕಾರು
ವಿಷಯಕ್ಕೆ ,ಆಗುವುದೇ ಚಿಂತೆ ।
ಮತ್ಯಾರು
ತಿಳಿದಿಹರು ನಮ್ಮನೆಯ ಹುಳುಕ
ಗೊತ್ತಾದ್ರು
ತಿಳಿಸದಿರಿ ಮನಸ್ಸಿನ ಅಳುಕ ।।
--ಗೋ ನಾ ರಾಮಕೃಷ್ಣ ಭಟ್
No comments:
Post a Comment